Google Chrome ಸೇವಾ ನಿಯಮಗಳು

ಈ ಸೇವೆಯ ನಿಬಂಧನೆಗಳು Google Chrome ನ ಕಾರ್ಯಗತಗೊಳಿಸುವ ಕೋಡ್ ನ ಆವೃತ್ತಿಗೆ ಅನ್ವಯಿಸುತ್ತದೆ. Google Chrome ನ ತೆರೆದ ಮೂಲ ಕೋಡ್ http://code.googl e.com/chromium/terms.html ನಲ್ಲಿ ಉಚಿತ ಸಾಫ್ಟ್‌ವೇರ್ ಪರವಾನಗಿ ಒಪ್ಪಂದದ ಕೆಳಗೆ ಲಭ್ಯವಿದೆ.

1. Google ನೊಂದಿಗೆ ನಿಮ್ಮ ಸಂಬಂಧ

1.1 ನಿಮ್ಮ Google ನ ಉತ್ಪನ್ನಗಳು, ಸಾಫ್ಟ್‌ವೇರ್, ಸೇವೆಗಳು ಮತ್ತು ವೆಬ್ ಸೈ‍ಟ್‌ಗಳು (“ಸೇವೆಗಳು&rdquo ಅನ್ನು ಒಟ್ಟಾಗಿ ಉಲ್ಲೇಖಿಸಲಾಗಿದೆ; ಮತ್ತು ಈ ಡಾಕ್ಯುಮೆಂಟ್ Google ನಿಂದ ನಿಮಗೆ ಒದಗಿಸಿದ ಪ್ರತ್ಯೇಕ ಲಿಖಿತ ಒಪ್ಪಂದದ ಅಡಿಯಲ್ಲಿ ನಿಮಗೆ ಒದಗಿಸಲಾದ ಯಾವುದೇ ಸೇವೆಗಳನ್ನು ಹೊರತುಪಡಿಸಿ) ನಿಮ್ಮ ಮತ್ತು Google ನ ಮಧ್ಯೆ ಇರುವ ಕಾನೂನುಬದ್ದ ಒಪ್ಪಂದದ ನೀತಿಗಳಿಗೆ ಸಂಬಂಧಿಸಿರುತ್ತವೆ. “Google” “Google” ಎಂದರೆ Google Inc. ಇದರ ಪ್ರಧಾನ ವ್ಯವಹಾರ ಸ್ಥಳವು 1600 Amphitheatre Parkway, Mountain View, CA 94043, United States ನಲ್ಲಿದೆ. ಈ ಡಾಕ್ಯುಮೆಂಟ್ ಒಪ್ಪಂದವನ್ನು ಹೇಗೆ ಮಾಡಲಾಗಿದೆ ಎಂಬುದನ್ನು ವಿವರಿಸುತ್ತದೆ, ಮತ್ತು ಒಪ್ಪಂದದ ಕೆಲವು ನಿಯಮಗಳನ್ನು ವಿವರಿಸುತ್ತದೆ.

1.2 Google ನೊಂದಿಗೆ ಲಿಖಿತವಾಗಿ ಒಪ್ಪಿಕೊಳ್ಳದ ಹೊರತು, ಕನಿಷ್ಟ ಈ ದಾಖಲೆಯಲ್ಲಿ ನಿಗದಿಪಡಿಸಲಾಗಿರುವ ನಿಯಮಗಳು ಮತ್ತು ಷರತ್ತುಗಳನ್ನು Google ನೊಂದಿಗಿನ ನಿಮ್ಮ ಒಪ್ಪಂದವು ಹೊಂದಿರುತ್ತದೆ. ಇವುಗಳನ್ನು ಕೆಳಗೆ “ಸಾರ್ವತ್ರಿಕ ನಿಯಮಗಳು” ಎಂದು ಉಲ್ಲೇಖಿಸಲಾಗಿದೆ. Google Chrome ಮೂಲ ಕೋಡ್‌ಗಾಗಿ ತೆರೆದ ಮೂಲ ಸಾಫ್ಟ್‌ವೇರ್ ಪರವಾನಗಿಯು ಪ್ರತ್ಯೇಕವಾದ ಲಿಖಿತ ಒಪ್ಪಂದವನ್ನು ಹೊಂದಿರುತ್ತದೆ. ಕೆಲವು ಮಿತಿಯವರೆಗೆ ತೆರೆದ ಮೂಲ ಸಾಫ್ಟ್‌ವೇರ್ ಪರವಾನಗಿಯು ಈ ಸಾರ್ವತ್ರಿಕ ನಿಯಮಗಳನ್ನು ವ್ಯಕ್ತವಾಗಿ ಅಗ್ರಸ್ಥಾನವನ್ನು ವಹಿಸುತ್ತದೆ, Google Chrome ಅಥವಾ Google Chrome ನ ನಿರ್ದಿಷ್ಟವಾಗಿ ಸೇರ್ಪಡಿಸಿದ ಅಂಶಗಳ ಬಳಕೆಗಾಗಿ Google ನೊಂದಿಗೆ ನಿಮ್ಮ ಒಪ್ಪಂದವನ್ನು ತೆರೆದ ಮೂಲ ಪರವಾನಗಿಗಳು ನಿಯಂತ್ರಿಸುತ್ತವೆ.

Google ನೊಂದಿಗಿನ ನಿಮ್ಮ ಒಪ್ಪಂದ ಸಾರ್ವತ್ರಿಕ ನಿಯಮಗಳಿಗೆ ಹೆಚ್ಚುವರಿಯಾಗಿ, ಸೇವೆಗಳಿಗೆ ಅನ್ವಯವಾಗುವ ಯಾವುದೇ ಕಾನೂನಿನ ಸೂಚನೆಗಳ ನಿಯಮಗಳನ್ನು ಒಳಗೊಂಡಿರುತ್ತದೆ. ಇವುಗಳಲ್ಲಿ ಎಲ್ಲವು “ಹೆಚ್ಚುವರಿ ನಿಯಮಗಳು” ಎಂದು ಉಲ್ಲೇಖಿಸಿದವುಗಳಾಗಿವೆ. ಸೇವೆಗೆ ಹೆಚ್ಚುವರಿ ನಿಯಮಗಳನ್ನು ಅನ್ವಯಿಸಿದಲ್ಲಿ, ಇವುಗಳು ನಿಮಗೆ ಓದಲು ಅದರಲ್ಲಿ, ಅಥವಾ ನಿಮ್ಮ ಆ ಸೇವೆಯ ಬಳಕೆಯ ಮೂಲಕ ಲಭ್ಯವಿರುತ್ತದೆ.

1.4 ಹೆಚ್ಚುವರಿ ಬಳಕೆಗಳು ಸಾರ್ವತ್ರಿಕ ಬಳಕೆಗಳೊಂದಿಗೆ, ಸೇವೆಗಳ ನಿಮ್ಮ ಬಳಕೆಗೆ ಸಂಬಂಧಿಸಿದಂತೆ ನಿಮ್ಮ ಮತ್ತು Google ನ ಮಧ್ಯೆ ಕಾನೂನುಬದ್ದ ಒಪ್ಪಂದವನ್ನು ನಿರ್ಮಿಸುತ್ತದೆ. ನೀವು ಅವನ್ನು ಜಾಗರೂಕತೆಯಿಂದ ಓದುವುದು ಮುಖ್ಯ. ಒಟ್ಟಾರೆಯಾಗಿ ಈ ಕಾನೂನು ಒಪ್ಪಂದವನ್ನು ಈ ಕೆಳಗೆ “ನಿಯಮಗಳು” ಎಂದು ಉಲ್ಲೇಖಿಸಲಾಗಿದೆ.

1.5 ಹೆಚ್ಚುವರಿ ನಿಬಂಧನೆಗಳು ಏನು ಹೇಳುತ್ತವೆ ಮತ್ತು ಸಾರ್ವತ್ರಿಕ ನಿಬಂಧನೆಗಳು ಏನು ಹೇಳುತ್ತವೆ ಎಂಬುದರ ನಡುವೆ ಯಾವುದೇ ವಿರೋಧೋಕ್ತಿಗಳು ಇದ್ದರೆ, ಹೆಚ್ಚುವರಿ ನಿಬಂಧನೆಗಳು ಆ ಸೇವೆಯ ಸಂಬಂಧದಲ್ಲಿ ಅಗ್ರಸ್ಥಾನವನ್ನು ವಹಿಸುತ್ತದೆ.

2. 2. ನಿಯಮಗಳನ್ನು ಅಂಗೀಕರಿಸುವುದು

2.1 ಸೇವೆಗಳನ್ನು ಬಳಸಲು, ನೀವು ನಿಯಮಗಳಿಗೆ ಮೊದಲು ಒಪ್ಪಬೇಕು. ನೀವು ಈ ನಿಯಮಗಳನ್ನು ಅಂಗೀಕರಿಸದಿದ್ದರೆ ಈ ಸೇವೆಯನ್ನು ಬಳಸಲಾಗುವುದಿಲ್ಲ.

2.2 ನೀವು ಈ ನಿಯಮಗಳನ್ನು ಈ ರೀತಿ ಅಂಗೀಕರಿಸಬಹುದು:

(A) ಯಾವುದೇ ಸೇವೆಗೆ ಬಳಕೆದಾರ ಇಂಟರ್ಫೇಸ್‌ನಲ್ಲಿ ನಿಮಗಾಗಿ Google ಲಭ್ಯವಾಗಿಸಿದ ನಿಬಂಧನೆಗಳನ್ನು ಅಂಗೀಕರಿಸುವ ಅಥವಾ ಒಪ್ಪಿಕೊಳ್ಳುವ ಆಯ್ಕೆಯನ್ನು ಕ್ಲಿಕ್ ಮಾಡುವುದರ ಮೂಲಕ; ಅಥವಾ

(B) ಸೇವೆಗಳನ್ನು ನಿಜವಾಗಿಯೂ ಬಳಸುವ ಮೂಲಕ. ಈ ಸಂದರ್ಭದಲ್ಲಿ, ನಿಮ್ಮ ಸೇವೆಯ ಬಳಕೆಯನ್ನು, ನೀವು ನಿಯಮಗಳನ್ನು ಸ್ವೀಕರಿಸಿದ್ದೀರಿ ಎಂದು ಪರಿಗಣಿಸುತ್ತದೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ ಮತ್ತು ಒಪ್ಪುತ್ತೀರಿ.

2.3 (a) ನೀವು Google ನೊಂದಿಗೆ ಈ ಕರಾರನ್ನು ಹೊಂದಲು ಅಗತ್ಯವಾದ ವಯಸ್ಸು ನಿಮ್ಮದಲ್ಲವಾಗಿದ್ದರೆ, ಅಥವಾ (b) ಯುನೈಟೆಡ್ ಸ್ಟೇಟ್ಸ್‌‌ನ ಅಥವಾ ನೀವು ನೆಲೆಸಿರುವಂತಹ ಅಥವಾ ಸೇವೆಯನ್ನು ಪಡೆಯುತ್ತಿರುವಂತಹ ಇತರ ದೇಶಗಳ ಕಾನೂನಿನಡಿಯಲ್ಲಿ ಈ ಸೇವೆಯಿಂದ ಬಹಿಷ್ಕರಿಸಲ್ಪಟ್ಟವರಾಗಿದ್ದರೆ ನೀವು ಸೇವೆಗಳನ್ನು ಬಳಸುವಂತಿಲ್ಲ ಮತ್ತು ನಿಯಮಗಳನ್ನು ಅಂಗೀಕರಿಸುವಂತಿಲ್ಲ.

2.4 ನೀವು ಮುಂದುವರಿಯುವುದಕ್ಕಿಂತ ಮೊದಲು, ಸಾರ್ವತ್ರಿಕ ನಿಯಮಗಳ ಸ್ಥಳೀಯ ಪ್ರತಿಯನ್ನು ನಿಮ್ಮ ದಾಖಲೆಗಳಿಗಾಗಿ ಪ್ರಿಂಟ್ ಮಾಡಿಕೊಳ್ಳಬೇಕು ಅಥವಾ ಉಳಿಸಿಕೊಳ್ಳಬೇಕು.

3. ನಿಯಮಗಳ ಭಾಷೆ

3.1 ನಿಯಮಗಳ ಇಂಗ್ಲಿಷ್ ಭಾಷಾ ಆವೃತ್ತಿಯ ಭಾಷಾಂತರವನ್ನು Google ನಿಮಗೆ ಒದಗಿಸಿದ್ದಲ್ಲಿ, ಅದು ನಿಮ್ಮ ಅನುಕೂಲಕ್ಕಾಗಿ ಮಾತ್ರ ಅನುವಾದವನ್ನು ಒದಗಿಸಲಾಗಿದೆ ಹಾಗೂ ನಿಯಮಗಳ ಇಂಗ್ಲಿಷ್ ಆವೃತ್ತಿಗಳು Google ನೊಂದಿಗೆ ನಿಮ್ಮ ಸಂಬಂಧವನ್ನು ನಿರ್ಣಯಿಸುತ್ತದೆ ಎಂದು ನೀವು ಒಪ್ಪಿಕೊಳ್ಳಬೇಕು.

3.2 ನಿಯಮಗಳ ಇಂಗ್ಲೀಷ್ ಭಾಷಾ ಆವೃತ್ತಿಯ ಮತ್ತು ಅನುವಾದಿಸಿದ ಆವೃತ್ತಿಯ ನಡುವೆ ಏನಾದರೂ ಅಸಮಂಜಸತೆ ಕಂಡುಬಂದರೆ, ಇಂಗ್ಲೀಷ್ ಭಾಷಾ ಆವೃತ್ತಿಯನ್ನು ಆದ್ಯತೆಯಾಗಿ ಪರಿಗಣಿಸಲಾಗುವುದು.

4. Google ನಿಂದ ಸೇವೆಗಳ ಸೌಲಭ್ಯಗಳು

4.1 Google ನಲ್ಲಿ ಜಗತ್ತಿನಾದ್ಯಂತ ಅಂಗಸಂಸ್ಥೆಗಳು ಮತ್ತು ಕಾನೂನಿತ ಅನುದಾನಿತ ಅಂಶಗಳಿವೆ (“ಅಂಗಸಂಸ್ಥೆಗಳು ಮತ್ತು ಅನುದಾನಿತಗಳು”). ಕೆಲವೊಮ್ಮೆ, ಈ ಕಂಪನಿಗಳು Google ಪರವಾಗಿಯೇ ನಿಮಗೆ ಸೇವೆಗಳನ್ನು ಒದಗಿಸುತ್ತವೆ. ಅಧೀನ ಹಾಗೂ ಅಂಗಸಂಸ್ಥೆಗಳು ನಿಮಗೆ ಸೇವೆ ಒದಗಿಸುವ ಅಧಿಕಾರ ಹೊಂದಿವೆ ಎಂಬುದನ್ನು ನೀವು ಅಂಗೀಕರಿಸುತ್ತೀರಿ ಮತ್ತು ಒಪ್ಪುತ್ತೀರಿ.

4.2 ತನ್ನ ಬಳಕೆದಾರರಿಗೆ ಸಾಧ್ಯವಿರುವ ಎಲ್ಲ ಶ್ರೇಷ್ಠ ಅನುಭವಗಳನ್ನು ಒದಗಿಸಲು ನಿರಂತರವಾಗಿ Google ಹೊಸ ಬದಲಾವಣೆಗಳನ್ನು ಮಾಡುತ್ತಲೇ ಇರುತ್ತದೆ. Google ಒದಗಿಸುವ ಸೇವೆಗಳ ರೂಪ ಹಾಗೂ ಲಕ್ಷಣಗಳು ಪೂರ್ವಸೂಚನೆ ಇಲ್ಲದೆ, ಕಾಲಕಾಲಕ್ಕೆ ಬದಲಾಗಬಹುದೆಂದು ನೀವು ಅಂಗೀಕರಿಸುತ್ತೀರಿ ಮತ್ತು ಒಪ್ಪುತ್ತೀರಿ.

4.3 ನಿರಂತರ ಬದಲಾವಣೆಯಂಗವಾಗಿ, Google ತನ್ನ ಸ್ವಯಂ ವಿವೇಚನೆಯಿಂದ, ನಿಮಗೆ ಅಥವಾ ಸಾಮಾನ್ಯ ಬಳಕೆದಾರರಿಗೆ ಪೂರ್ವ ಸೂಚನೆ ಇಲ್ಲದೆ, Google ನ ಸೇವೆ ಒದಗಿಸುವುದನ್ನು ನಿಲ್ಲಿಸಬಹುದಾಗಿದೆ (ಶಾಶ್ವತವಾಗಿ ಅಥವಾ ತಾತ್ಕಾಲಿಕವಾಗಿ) ಎಂಬುದನ್ನು ನೀವು ಅಂಗೀಕರಿಸುತ್ತೀರಿ ಮತ್ತು ಒಪ್ಪುತ್ತೀರಿ. ಯಾವುದೇ ಸಮಯದಲ್ಲಿ ನೀವು ಸೇವೆಯ ಬಳಕೆಯನ್ನು ನಿಲ್ಲಿಸಬಹುದಾಗಿದೆ. ಸೇವೆಗಳ ಬಳಕೆಯನ್ನು ನಿಲ್ಲಿಸುವ ವೇಳೆ ನೀವು ಗೆ ನಿರ್ದಿಷ್ಟವಾಗಿ ಮಾಹಿತಿ ನೀಡುವ ಅಗತ್ಯವಿಲ್ಲ.

4.4 ನಿಮ್ಮ ಖಾತೆಗೆ ಪ್ರವೇಶವನ್ನು Google ನಿಷ್ಕ್ರಿಯಗೊಳಿಸಿದ್ದರೆ, ಸೇವೆಗಳಿಗೆ ಪ್ರವೇಶವನ್ನು, ನಿಮ್ಮ ಖಾತೆಯ ವಿವರಗಳು ಅಥವಾ ಯಾವುದೇ ಫೈಲ್ಗಳು ಅಥವಾ ನಿಮ್ಮ ಖಾತೆಯು ಹೊಂದಿರುವ ಇತರ ಯಾವುದೇ ವಿಷಯಗಳಿಗೆ ಪ್ರವೇಶವನ್ನು ತಡೆಯಲಾಗುವುದು ಎಂಬುದನ್ನು ನೀವು ಅಂಗೀಕರಿಸುತ್ತೀರಿ ಮತ್ತು ಒಪ್ಪುತ್ತೀರಿ.

4.5 ನಿಮ್ಮ ಸೇವೆಗಳ ಮೂಲಕ ನೀವು ಕಳುಹಿಸುವ ಮತ್ತು ಸ್ವೀಕರಿಸುವ ಪ್ರಸಾರಗಳ ಸಂಖ್ಯೆಗಳಿಗೆ ಪ್ರಸ್ತುತ Google ಯಾವುದೇ ನಿಶ್ಚಿತವಾದ ಮೇಲ್ಮಿತಿಯನ್ನು ಹೊಂದಿಸಲಿಲ್ಲ ಅಥವಾ ಯಾವುದೇ ಸೇವೆಗಳಲ್ಲಿ ಬಳಸುವ ಸಂಗ್ರಹ ಸ್ಥಳದ ಪ್ರಮಾಣವನ್ನು ನಿಯಮಿತಗೊಳಿಸಲಿಲ್ಲ, ಆದರೆ Google ತನ್ನ ಇಚ್ಛಾನುಸಾರವಾಗಿ ಅಂತಹ ನಿಶ್ಚಿತವಾದ ಮೇಲ್ಮಿತಿಯನ್ನು ಯಾವುದೇ ಸಮಯದಲ್ಲಿ ಹೊಂದಿಸಬಹುದು ಎಂಬುದನ್ನು ನೀವು ಸಮ್ಮತಿಸಬೇಕು ಮತ್ತು ಒಪ್ಪಿಕೊಳ್ಳಬೇಕು.

5. ನಿಮ್ಮಿಂದ ಸೇವೆಗಳ ಬಳಕೆ

5.1 ಕೆಲವು ನಿರ್ದಿಷ್ಟ ಸೇವೆಗಳನ್ನು ಪ್ರವೇಶಿಸಲು, ಸೇವೆಗಳ ನೋಂದಣಿ ಪ್ರಕ್ರಿಯೆಯ ಭಾಗವೆಂಬಂತೆ, ಅಥವಾ ಸೇವೆಗಳ ನಿರಂತರ ಬಳಕೆಯ ಭಾಗವಾಗಿ, ನಿಮ್ಮ ಬಗೆಗಿನ ಮಾಹಿತಿಯನ್ನು ಒದಗಿಸಬೇಕಾಗಬಹುದು (ಗುರುತಿನ ಅಥವಾ ಸಂಪರ್ಕ ವಿವರಗಳು). ನೀವು Google ಗೆ ನೀಡುವಂತಹ ಯಾವುದೇ ನೋಂದಣಿ ಮಾಹಿತಿಗಳು ಯಾವಾಗಲೂ ನಿಖರ, ನಿಜ ಮತ್ತು ಇತ್ತೀಚಿನದ್ದಾಗಿದೆ ಎಂದು ನೀವು ಒಪ್ಪುತ್ತೀರಿ.

5.2 (a) ನಿಬಂಧನೆಗಳು ಮತ್ತು (b) ಯಾವುದೇ ಅನ್ವಯಿತ ಕಾನೂನು, ಶಾಸನ ಅಥವಾ ಸಾಮಾನ್ಯವಾಗಿ ಸ್ವೀಕರಿಸಿರುವ ಅನುಷ್ಠಾನಗಳು ಅಥವಾ ಪ್ರಸ್ತುತ ಅಧಿಕಾರ ವ್ಯಾಪ್ತಿಯಲ್ಲಿರುವ ಮಾರ್ಗಸೂಚಿಗಳು (ಯುನೈಟೆಡ್ ಸ್ಟೇಟ್ಸ್ ಅಥವಾ ಇತರ ಪ್ರಸಕ್ತ ದೇಶಗಳಿಂದ ಮತ್ತು ದೇಶಗಳಿಗೆ ಡೇಟಾ ಅಥವಾ ಸಾಫ್ಟ್‌ವೇರ್‌ಗಳನ್ನು ರಫ್ತು ಮಾಡುವುದಕ್ಕಾಗಿರುವ ಯಾವುದೇ ನಿಯಮಗಳು ಸೇರಿದಂತೆ) ಅನುಮತಿಸಿದಂತಹ ಉದ್ದೇಶಗಳಿಗೆ ಮಾತ್ರ ನೀವು ಸೇವೆಗಳನ್ನು ಬಳಸಬಹುದೆಂದು ನೀವು ಒಪ್ಪಿಕೊಳ್ಳಬೇಕು.

5.3 Google ನೊಂದಿಗೆ ಪ್ರತ್ಯೇಕ ಒಪ್ಪಂದದ ಮೂಲಕ ನೀವು ನಿರ್ದಿಷ್ಟವಾಗಿ ಅನುಮತಿ ಪಡೆಯದ ಹೊರತು, Google ಒದಗಿಸಿದ ಇಂಟರ್ಫೇಸ್‌ನ ಹೊರತಾಗಿ ನೀವು ಯಾವುದೇ ಸೇವೆಗಳನ್ನು ಪ್ರವೇಶಿಸುವಂತಿಲ್ಲ (ಅಥವಾ ಪ್ರವೇಶಿಸಲು ಪ್ರಯತ್ನಿಸುವಂತಿಲ್ಲ) ಎಂಬುದನ್ನು ನೀವು ಒಪ್ಪುತ್ತೀರಿ. ಯಾವುದೇ ರೀತಿಯಲ್ಲಿ ಸ್ವಯಂಚಾಲಿತವಾಗಿ (ಸ್ಕ್ರಿಪ್ಟ್‌ಗಳು ಅಥವಾ ವೆಬ್ ಕ್ರಾಲರ್‌ಗಳು) ದ ಮೂಲಕ ಯಾವುದೇ ಸೇವೆಗಳಿಗೆ ಪ್ರವೇಶಿಸುವುದಿಲ್ಲವೆಂದು (ಅಥವಾ ಪ್ರವೇಶಕ್ಕೆ ಪ್ರಯತ್ನಿಸದಿರಲು) ನೀವು ನಿರ್ದಿಷ್ಟವಾಗಿ ಒಪ್ಪುತ್ತೀರಿ ಮತ್ತು ನೀವು ಸೇವೆಗಳಲ್ಲಿ ಇರುವ ಯಾವುದೇ robots.txt ಫೈಲ್‌ನಲ್ಲಿ ಹೊಂದಿಸಿದ ಸೂಚನೆಗಳಿಗೆ ಅನುಗುಣವಾಗಿರುತ್ತೀರಿ ಎಂದು ಖಚಿತಪಡಿಸಿಕೊಳ್ಳುತ್ತೀರಿ.

5.4 ಸೇವೆಗಳಿಗೆ (ಅಥವಾ ಸೇವೆಗಳಿಗೆ ಸಂಪರ್ಕವಿರುವ ಸರ್ವರ್‌ಗಳು ಮತ್ತು ನೆಟ್‌ವರ್ಕ್‌ಗಳು) ಮಧ್ಯ ಪ್ರವೇಶಿಸುವ ಅಥವಾ ಅವುಗಳಿಗೆ ಅಡ್ಡಿಯುಂಟುಮಾಡುವ ಯಾವುದೇ ಚಟುವಟಿಕೆಗಳನ್ನು ನಡೆಸುವುದಿಲ್ಲ ಎಂಬುದನ್ನು ನೀವು ಒಪ್ಪುತ್ತೀರಿ.

5.5 Google ನೊಂದಿಗೆ ಪ್ರತ್ಯೇಕ ಒಪ್ಪಂದದ ವಿನಹ, ಯಾವುದೇ ಉದ್ದೇಶಕ್ಕಾಗಿ ಸೇವೆಗಳನ್ನು ಪುನರುತ್ಪಾದನೆ, ನಕಲು, ಪ್ರತಿ, ಮಾರಾಟ, ವ್ಯಾಪಾರ ಅಥವಾ ಮರು ಮಾರಾಟ ಮಾಡುವುದಿಲ್ಲ ಎಂಬುದನ್ನು ನೀವು ಒಪ್ಪುತ್ತೀರಿ.

5.6 ನಿಯಮಗಳಡಿಯಲ್ಲಿನ ನಿಮ್ಮ ಬದ್ಧತೆಗಳ ಉಲ್ಲಂಘನೆಗೆ ಮತ್ತು ಇಂತಹ ಯಾವುದೇ ಉಲ್ಲಂಘನೆಗಳ ಪರಿಣಾಮಗಳಿಗೆ ನೀವೇ ಜವಾಬ್ದಾರರು (ಮತ್ತು ನಿಮಗೆ ಅಥವಾ ಯಾವುದೇ ತೃತೀಯ ಪಕ್ಷಕ್ಕೆ Google ಯಾವುದೇ ಜವಾಬ್ದಾರಿ ಹೊಂದಿರುವುದಿಲ್ಲ ) ಎಂಬುದನ್ನು ನೀವು ಒಪ್ಪುತ್ತೀರಿ.

6. ನಿಮ್ಮ ಪಾಸ್‌ವರ್ಡ್‌ಗಳು ಮತ್ತು ಖಾತೆಯ ಸುರಕ್ಷೆ

6.1 ಸೇವೆಗಳನ್ನು ಪ್ರವೇಶಿಸುವುದಕ್ಕಾಗಿ ನೀವು ಬಳಸುವ ಯಾವುದೇ ಖಾತೆಗೆ ಸಂಬಂಧಿಸಿದ ಪಾಸ್ವರ್ಡ್‌ಗಳ ರಹಸ್ಯವನ್ನು ಕಾಪಾಡಿಕೊಂಡು ಬರುವ ಹೊಣೆಯು ನಿಮ್ಮದಾಗಿದೆ ಎಂದು ನೀವು ಅಂಗೀಕರಿಸುತ್ತೀರಿ ಮತ್ತು ಒಪ್ಪುತ್ತೀರಿ.

6.2 ಅದೇ ಪ್ರಕಾರ, ನಿಮ್ಮ ಖಾತೆಯಡಿಯ ಸಂಭವಿಸುವ ಎಲ್ಲ ಚಟುವಟಿಕೆಗಳಿಗೆ ಸಂಬಂಧಿಸಿದಂತೆ Google ಗೆ ನೀವೇ ಸ್ವಯಂ ಹೊಣೆಗಾರರಾಗಿರುವಿರಿ ಎಂಬುದನ್ನು ನೀವು ಒಪ್ಪುತ್ತೀರಿ.

6.3 ನಿಮ್ಮ ಪಾಸ್ವರ್ಡ್‌ನ ಅಥವಾ ಖಾತೆಯ ಯಾವುದೇ ಅನಧಿಕೃತ ಬಳಕೆಯ ಬಗ್ಗೆ ತಿಳಿದುಬಂದರೆ, ನೀವು ತಕ್ಷಣ http://www.google.com/support/accounts/bin/answer.py? answer=48601 ದಲ್ಲಿ Google ಗೆ ಸೂಚಿಸಲು ಒಪ್ಪಿಕೊಳ್ಳಬೇಕು.

7. ಗೌಪ್ಯತೆ ಮತ್ತು ನಿಮ್ಮ ವೈಯಕ್ತಿಕ ಮಾಹಿತಿ

Google ನ ಡೇಟಾ ಭದ್ರತಾ ಪದ್ಧತಿಯ ಮಾಹಿತಿಗಾಗಿ, ದಯವಿಟ್ಟು Google ನ ಗೌಪ್ಯತಾ ನಿಯಮವನ್ನು ಇಲ್ಲಿ ಓದಿ http://www.google.com/pri vacy.html. ಈ ನೀತಿಯು, ನೀವು ಸೇವೆಗಳನ್ನು ಬಳಸುವಾಗ ನಿಮ್ಮ ವೈಯಕ್ತಿಕ ಮಾಹಿತಿಯನ್ನು Google ಯಾವ ರೀತಿ ಬಳಸಿಕೊಳ್ಳುತ್ತದೆ, ಮತ್ತು ನಿಮ್ಮ ಗೌಪ್ಯತೆಗಳನ್ನು ಹೇಗೆ ರಕ್ಷಿಸುತ್ತದೆ ಎಂಬುದನ್ನು ವಿವರಿಸುತ್ತದೆ.

7.2 Google ನ ಗೌಪ್ಯತಾ ನೀತಿಗಳಿಗೆ ಅನುಸಾರವಾಗಿ ನಿಮ್ಮ ಡೇಟಾಗಳನ್ನು ಬಳಸಲು ನೀವು ಒಪ್ಪುತ್ತೀರಿ.

8. ಸೇವೆಗಳಲ್ಲಿರುವ ವಿಷಯ

8.1 ಸೇವೆಗಳ ಭಾಗವಾಗಿ, ಅಥವಾ ನಿಮ್ಮ ಬಳಕೆಯ ಮೂಲಕ ನೀವು ಪ್ರವೇಶಿಸಬೇಕಾಗುವ ಎಲ್ಲ ಮಾಹಿತಿಗಳು (ಡೇಟಾ ಫೈಲ್‌ಗಳು, ಲಿಖಿತ ಪಠ್ಯ, ಕಂಪ್ಯೂಟರ್ ಸಾಫ್ಟ್‌ವೇರ್, ಸಂಗೀತ, ಆಡಿಯೋ ಫೈಲ್‌ಗಳು ಅಥವಾ ಇತರ ಧ್ವನಿಗಳು, ಛಾಯಾಚಿತ್ರಗಳು, ವಿಡಿಯೋ ಅಥವಾ ಇತರ ಇಮೇಜುಗಳು), ಯಾವ ವ್ಯಕ್ತಿಯಿಂದ ಈ ವಿಷಯವು ಸೃಷ್ಟಿಯಾಗಿದೆಯೋ ಅವರೇ ಅದಕ್ಕೆ ಸಂಪೂರ್ಣ ಜವಾಬ್ದಾರರು ಎಂಬುದನ್ನು ನೀವು ತಿಳಿದಿದ್ದೀರಿ. ಅಂತಹ ಎಲ್ಲಾ ಮಾಹಿತಿಗಳನ್ನು ಕೆಳಗೆ “ವಿಷಯ” ಎಂದು ಉಲ್ಲೇಖಿಸಲಾಗಿದೆ.

8.2 ಸೇವೆಗಳಲ್ಲಿರುವ ಜಾಹೀರಾತುಗಳು ಮತ್ತು ಅಷ್ಟೇ ಅಲ್ಲದೇ ಸೇವೆಗಳ ಒಳಗಿನ, ಸೇವೆಗಳ ಒಂದು ಭಾಗವಾಗಿ ನಿಮಗೆ ಪರಿಚಯಿಸಲಾಗುವ ಇತರ ವಿಷಯಗಳು Google (ಅಥವಾ ಅವರ ಪರವಾಗಿ ಇತರ ವ್ಯಕ್ತಿಗಳು ಅಥವಾ ಕಂಪೆನಿಗಳು) ಗೆ ವಿಷಯವನ್ನು ಒದಗಿಸುವ ಪ್ರಾಯೋಜಕರು ಅಥವಾ ಜಾಹೀರಾತುಗಾರರ ವಶಕ್ಕೆ ಒಳಪಟ್ಟ ಬೌದ್ದಿಕ ಆಸ್ತಿಯ ಹಕ್ಕುಗಳಿಂದ ರಕ್ಷಿಸಲ್ಪಟ್ಟಿರುತ್ತವೆ, ಎಂದು ನೀವು ಅರಿತಿರಬೇಕು. ನಿಮಗೆ ನಿರ್ದಿಷ್ಟವಾಗಿ Google ನಿಂದ ಅಥವಾ ಆ ವಿಷಯದ ಮಾಲೀಕರಿಂದ ಪ್ರತ್ಯೇಕವಾದ ಒಪ್ಪಂದದಿಂದ ನೀವು ನಿರ್ದೇಶನವನ್ನು ಪಡೆಯದಿದ್ದಾಗ ನೀವು ಈ ವಿಷಯವನ್ನು ಬಳಸಿಕೊಂಡು ಹೊಸ ಉತ್ಪನ್ನವನ್ನು (ಪೂರ್ಣವಾಗಿ ಅಥವಾ ಒಂದು ಭಾಗವಾಗಿ) ರಚಿಸಲು ಅವುಗಳನ್ನು ಮಾರ್ಪಡಿಸುವಂತಿಲ್ಲ, ಬಾಡಿಗೆಗೆ ನೀಡುವುದು, ಗುತ್ತಿಗೆ, ಸಾಲ, ಮಾರಾಟ ಅಥವಾ ವಿತರಣೆ ಮಾಡುವಂತಿಲ್ಲ.

8.3 ಯಾವುದೇ ಸೇವೆಯಿಂದ ಯಾವುದೇ ಅಥವಾ ಎಲ್ಲಾ ವಿಷಯಗಳನ್ನು ಪೂರ್ವಪ್ರದರ್ಶನ, ಪರಾಮರ್ಶೆ, ಫ್ಲ್ಯಾಗ್, ಫಿಲ್ಟರ್, ನವೀಕರಣ, ನಿರಾಕರಣೆ ಮಾಡುವ ಅಥವಾ ತೆಗೆದುಹಾಕುವ ಹಕ್ಕನ್ನು (ಆದರೆ, ಯಾವುದೇ ಬಾಧ್ಯತೆ ಹೊಂದದೇ) Google ಕಾಯ್ದಿರಿಸಿಕೊಂಡಿದೆ. ಕೆಲವೊಂದು ಸೇವೆಗಳಿಗೆ, ಲೈಂಗಿಕ ವಿಷಯಗಳನ್ನು ಫಿಲ್ಟರ್ ಮಾಡಲು Google ಪರಿಕರಗಳನ್ನು ಒದಗಿಸಬಹುದು. ಈ ಪರಿಕರಗಳು ಸುರಕ್ಷಿತ ಹುಡುಕಾಟ ಆದ್ಯತಾ ಸೆಟ್ಟಿಂಗ್ಸ್ಅನ್ನು ಒಳಗೊಂಡಿವೆ. (http://www.go ogle.com/help/customize.html#safe ನೋಡಿ). ಹೆಚ್ಚುವರಿಯಾಗಿ, ನಿಮಗೆ ಆಕ್ಷೇಪಣಾರ್ಹ ಎಂಬಂತೆ ಕಂಡುಬರುವ ವಸ್ತುಗಳಿಗೆ ಪ್ರವೇಶವನ್ನು ಮಿತಿಗೊಳಿಸಲು ವಾಣಿಜ್ಯವಾಗಿ ಲಭ್ಯವಾಗುವ ಸೇವೆಗಳು ಮತ್ತು ಸಾಫ್ಟ್ವೇರ್ಗಳಿವೆ.

8.4 ನೀವು ಸೇವೆಗಳನ್ನು ಬಳಸುವಾಗ ರೇಗಿಸುವಂತಹ, ಅಸಭ್ಯ ಅಥವಾ ಆಕ್ಷೇಪಣಾರ್ಹ ವಿಷಯಗಳಿಗೆ ನೀವು ತೆರೆದುಕೊಳ್ಳಬಹುದು, ಆ ರೀತಿ ಆದಲ್ಲಿ, ನೀವು ಸೇವೆಗಳನ್ನು ನಿಮ್ಮ ಸ್ವಂತ ಜವಾಬ್ದಾರಿಯಲ್ಲಿ ಬಳಸುತ್ತೀರೆಂದು ಅರ್ಥಮಾಡಿಕೊಳ್ಳಬೇಕು.

8.5 ಈ ಸೇವೆಗಳನ್ನು ಬಳಸಿ ರಚಿಸುವ ಯಾವುದೇ ವಿಷಯ, ಅದರ ಪ್ರಸಾರ ಅಥವಾ ಪ್ರದರ್ಶನಕ್ಕೆ ನೀವೇ ಜವಾಬ್ದಾರರು ಮತ್ತು (ಮತ್ತು Google ನಿಮಗೆ ಅಥವಾ ಯಾವುದೇ ತೃತೀಯ ಪಕ್ಷಕ್ಕೆ ಯಾವ ರೀತಿಯೂ ಜವಾಬ್ದಾರಿಯಲ್ಲ) ನಿಮ್ಮ ಈ ಕ್ರಿಯೆಗಳಿಂದ ಉಂಟಾಗುವ ಯಾವುದೇ ಪರಿಣಾಮಗಳಿಗೂ (Google ಅನುಭವಿಸುವ ಯಾವುದೇ ನಷ್ಟ ಅಥವಾ ಹಾನಿ ಒಳಗೊಂಡಂತೆ) ನೀವೇ ಹೊಣೆಗಾರರೆಂದು ನೀವು ಒಪ್ಪುತ್ತೀರಿ.

9. ಮಾಲೀಕತ್ವ ಹಕ್ಕುಗಳು

Google (ಅಥವಾ Google ನ ಪರವಾನಗಿ ಹೊಂದಿರುವವರು) ಸೇವೆಗಿರುವ ಎಲ್ಲಾ ಕಾನೂನು ಹಕ್ಕುಗಳ, ಯಜಮಾನ್ಯ ಮತ್ತು ಹಿತಾಸಕ್ತಿಗಳ (ಆ ಹಕ್ಕುಗಳು ನೋಂದಣಿ ಆಗಿದೆಯೋ ಅಥವಾ ಇಲ್ಲವೋ, ಮತ್ತು ಜಗತ್ತಿನ ಎಲ್ಲಿಯಾದರೂ ಆ ಹಕ್ಕುಗಳು ಅಸ್ತಿತ್ವದಲ್ಲಿರಬಹುದು) ಕಾನೂನು ಹಕ್ಕುಗಳನ್ನು Google ಹೊಂದಿದೆ ಎಂದು ನೀವು ಅಂಗೀಕರಿಸುತ್ತೀರಿ ಮತ್ತು ಒಪ್ಪುತ್ತೀರಿ. ಸೇವೆಗಳು Google ನಿಂದ ಗೊತ್ತುಪಡಿಸಿದ ರಹಸ್ಯ ಮಾಹಿತಿಯನ್ನು ಒಳಗೊಂಡಿರಬಹುದು ಮತ್ತು Google ನ ಪೂರ್ವ ಲಿಖಿತ ಸಮ್ಮತಿ ಇಲ್ಲದೆ ಅಂತಹ ಮಾಹಿತಿಯನ್ನು ಬಹಿರಂಗಪಡಿಸುವಂತಿಲ್ಲ ಎಂದು ಸಹಾ ಅಂಗೀಕರಿಸುತ್ತೀರಿ.

9.2 ನೀವು Google ನೊಂದಿಗೆ ಲಿಖಿತ ಒಪ್ಪಂದ ಮಾಡಿಕೊಳ್ಳದ ಹೊರತು, ನಿಮಗೆ Google ನ ವ್ಯಾಪಾರ ಹೆಸರುಗಳು, ವ್ಯಾಪಾರ ಮುದ್ರೆ, ಸೇವಾ ಮುದ್ರೆ, ಲೋಗೋಗಳು, ಡೊಮೇನ್ ಹೆಸರುಗಳು ಮತ್ತು ಇತರ ವಿಶಿಷ್ಟ ಬ್ರ್ಯಾಂಡ್ ವೈಶಿಷ್ಟ್ಯಗಳನ್ನು ಬಳಸುವ ಹಕ್ಕು ಇರುವುದಿಲ್ಲ.

9.3 Google ನೊಂದಿಗೆ ಪ್ರತ್ಯೇಕವಾದ ಲಿಖಿತ ಒಪ್ಪಂದವೊಂದರಲ್ಲಿ ಇವುಗಳಲ್ಲಿ ಯಾವುದಾದರೊಂದು ಬ್ರ್ಯಾಂಡ್ ವೈಶಿಷ್ಟ್ಯಗಳನ್ನು ಬಳಸಲು ವ್ಯಕ್ತವಾದ ಹಕ್ಕನ್ನು ನಿಮಗೆ ನೀಡಿದರೆ, ಅಂತಹ ವೈಶಿಷ್ಟ್ಯಗಳ ಬಳಕೆಯು ಆ ಒಪ್ಪಂದದ, ನಿಯಮಗಳ ಅನ್ವಯಿತ ಸೌಲಭ್ಯಗಳ, ಮತ್ತು Google ನವರ ಬ್ರ್ಯಾಂಡ್ ವೈಶಿಷ್ಟ್ಯವು ಸಮಯಕ್ಕೆ ನವೀಕರಿಸಿದ ಮಾರ್ಗಸೂಚಿಗಳನ್ನು ಅನುವರ್ತಿಸುತ್ತದೆ ಎಂದು ಒಪ್ಪಿಕೊಳ್ಳುತ್ತೀರಿ. ಈ ಮಾರ್ಗಸೂಚಿಗಳನ್ನು http://www .google.com/permissions/guidelines.html ರಲ್ಲಿ ಆನ್ಲೈನ್ನಲ್ಲಿ ವೀಕ್ಷಿಸಬಹುದು (ಅಥವಾ ಈ ಉದ್ದೇಶಕ್ಕಾಗಿ ಕಾಲಾನುಕ್ರಮಕ್ಕೆ ತಕ್ಕಂತೆ Google ಒದಗಿಸಬಹುದಾದಂತಹ ಅಂತಹ ಇತರ URL ಗಳು)

9.4 ಪರಿಚ್ಛೇದ 11 ರಲ್ಲಿ ತಿಳಿಸಲಾದ ನಿಯಮಿತ ಪರವಾನಗಿಯ ಹೊರತುಪಡಿಸಿ, ನಿಮ್ಮ ಯಾವುದೇ ವಿಷಯದ ಸಲ್ಲಿಸುವಿಕೆ, ಪೋಸ್ಟ್ ಮಾಡುವಿಕೆ, ಪ್ರಸಾರ ಮತ್ತು ಪ್ರದರ್ಶನಗಳಲ್ಲಿ, ಯಾವುದೇ ಬೌದ್ಧಿಕ ಆಸ್ತಿ ಹಕ್ಕುಗಳು ಆ ವಿಷಯದಲ್ಲಿದ್ದರೆ ಅವುಗಳನ್ನು ಒಳಗೊಂಡು ಅಥವಾ ಈ ನಿಬಂಧನೆಗಳಡಿಯಲ್ಲಿ ನಿಮ್ಮಿಂದ ಯಾವುದೇ ಹಕ್ಕು, ಯಜಮಾನ್ಯ ಮತ್ತು ಹಿತಾಸಕ್ತಿಗಳನ್ನು ಪಡೆಯುವುದಿಲ್ಲ (ಆ ಹಕ್ಕುಗಳು ನೋಂದಣಿ ಆಗಿದೆಯೋ ಅಥವಾ ಇಲ್ಲವೋ, ಮತ್ತು ಜಗತ್ತಿನ ಎಲ್ಲಿಯಾದರೂ ಆ ಹಕ್ಕುಗಳು ಅಸ್ತಿತ್ವದಲ್ಲಿರಬಹುದು) ಎಂಬುದನ್ನು Google ಸಮ್ಮತಿಸುತ್ತದೆ ಮತ್ತು ಒಪ್ಪಿಕೊಳ್ಳುತ್ತದೆ. ನಿಮ್ಮ ಲಿಖಿತ ಒಪ್ಪಂದವಿಲ್ಲದಿದ್ದರೆ, ಆ ಹಕ್ಕುಗಳನ್ನು ರಕ್ಷಿಸಲು ಮತ್ತು ಅವುಗಳನ್ನು ಜಾರಿಗೆ ತರಲು ನೀವೇ ಜವಾಬ್ದಾರರು ಮತ್ತು ನಿಮ್ಮ ಪರವಾಗಿ ಅವುಗಳನ್ನು ರಕ್ಷಿಸಲು Google ಗೆ ಯಾವುದೇ ಭಾದ್ಯತೆಯಿಲ್ಲ ಎಂಬುದನ್ನು ನೀವು ಒಪ್ಪುತ್ತೀರಿ..

9.5 ನೀವು ಸೇವೆಗಳಲ್ಲಿ ಲಗತ್ತಿಸಿದ ಅಥವಾ ಸೇರಿಸಿರುವಂತಹ ಯಾವುದೇ ಮಾಲೀಕತ್ವ ಹಕ್ಕುಗಳ ಪ್ರಕಟಣೆಗಳನ್ನು (ಕೃತಿಸ್ವಾಮ್ಯ ಮತ್ತು ವ್ಯಾಪಾರ ಮುದ್ರೆ ಪ್ರಕಟಣೆಗಳನ್ನು ಒಳಗೊಂಡಂತೆ) ತೆಗೆದು ಹಾಕುವುದು, ಅಸ್ಪಷ್ಟಗೊಳಿಸುವುದು, ಮತ್ತು ಬದಲಾಯಿಸುವುದಾಗಲೀ ಮಾಡುವುದಿಲ್ಲ ಎಂಬುದನ್ನು ನೀವು ಒಪ್ಪಿಕೊಳ್ಳುತ್ತೀರಿ.

9.6 ನೀವು Google ನಿಂದ ಲಿಖಿತವಾಗಿ ವ್ಯಕ್ತ ಅಧಿಕಾರ ಪಡೆಯದ ಹೊರತು, ನೀವು ಈ ಸೇವೆಯನ್ನು ಬಳಸುವುದರ ಮೂಲಕ, ಯಾವುದೇ ವ್ಯಾಪಾರ ಮುದ್ರೆ, ಸೇವಾ ಮುದ್ರೆ, ವ್ಯಾಪಾರ ಹೆಸರು, ಯಾವುದೇ ಕಂಪನಿ ಅಥವಾ ಸಂಸ್ಥೆಯ ಲೋಗೊಗಳನ್ನು ಬಳಸುವುದಿಲ್ಲ ಅಥವಾ ಅಂತಹ ಮುದ್ರೆಗಳು, ಹೆಸರುಗಳು ಅಥವಾ ಲೋಗೊಗಳನ್ನು ಬಳಸುವ ಮಾಲೀಕರು ಅಥವಾ ಅಧಿಕೃತ ಬಳಕೆದಾರರ ಕುರಿತು ಗೊಂದಲಕ್ಕೆ ಆಸ್ಪದ ನೀಡುವುದಿಲ್ಲವೆಂಬುದನ್ನು ನೀವು ಒಪ್ಪುತ್ತೀರಿ.

10. Google ನಿಂದ ಪರವಾನಗಿ

10.1 Google ನಿಂದ ನಿಮಗೆ ಒದಗಿಸಲಾದಂತಹ ಸೇವೆಯ ಭಾಗವಾಗಿ ನಿಮಗೆ ಒದಗಿಸಲಾದ ಸಾಫ್ಟ್‌ವೇರ್ಅನ್ನು ವೈಯಕ್ತಿಕವಾಗಿ, ಜಗತ್ತಿನಾದ್ಯಂತ, ರಾಯಲ್ಟಿ-ಮುಕ್ತವಾಗಿ, ಹಸ್ತಾಂತರಿಸಲಾಗದ ಮತ್ತು ವಿಶೇಷವಲ್ಲದ ಪರವಾನಗಿಯನ್ನು Google ನಿಮಗೆ ನೀಡುತ್ತದೆ (ಕೆಳಗೆ “ಸಾಫ್ಟ್‌ವೇರ್” ಎಂದು ಉಲ್ಲೇಖಿಸಲಾಗಿದೆ). ನಿಯಮಗಳ ಅನುಮತಿಯ ಮೇರೆಗೆ Google ನಿಂದ ಒದಗಿಸಲಾದ ಸೇವೆಗಳ ಬಳಕೆ ಹಾಗೂ ಅದರ ಅನುಕೂಲದ ಅನುಭವವನ್ನು ನಿಮಗೆ ಲಭ್ಯವಾಗಿಸುವುದು ಈ ಪರವಾನಗಿಯ ಏಕಮಾತ್ರ ಉದ್ದೇಶವಾಗಿದೆ.

10.2 ನಿಮಗೆ ಇದನ್ನು ವ್ಯಕ್ತವಾಗಿ ಅನುಮತಿಸದೆ ಅಥವಾ ನಿಯಮದಿಂದ ಆದೇಶಿಸದಿದ್ದರೆ, ಅಥವಾ ನೀವು ನಿರ್ದಿಷ್ಟವಾಗಿ Google ಗೆ ಲಿಖಿತ ರೂಪದಲ್ಲಿ ಈ ರೀತಿ ಮಾಡಲು ಹೇಳಿರದಿದ್ದರೆ, ನೀವು ಸಾಫ್ಟ್ವೇರ್ನ ಮೂಲ ಕೋಡ್ ಅಥವಾ ಅದರ ಯಾವುದಾದರೊಂದು ಭಾಗವನ್ನು ಸಂಗ್ರಹಿಸಲು ಪ್ರಯತ್ನಿಸುವುದು ಅಥವಾ ಅದನ್ನು ನಕಲಿಸಲು, ಮಾರ್ಪಾಟು ಮಾಡಲು, ಅದರ ಉತ್ಪನ್ನವನ್ನು ರಚಿಸುವುದು, ರಿವರ್ಸ್ ಇಂಜಿನಿಯರ್, ಅಸಂಕಲಿಸುವುದನ್ನು ನೀವು ಮಾಡುವಂತಿಲ್ಲ (ಮತ್ತು ಇತರರನ್ನು ಮಾಡಲು ಅನುಮತಿಸುವಂತಿಲ್ಲ).

10.3 ನೀವು ಹೀಗೆ ಮಾಡಬಹುದೆಂದು Google ನಿಮಗೆ ನಿರ್ದಿಷ್ಟವಾಗಿ ಲಿಖಿತ ಅನುಮತಿ ನೀಡಿರದಿದ್ದರೆ, ನಿಮ್ಮ ಸಾಫ್ಟ್‌ವೇರ್ ಅನ್ನು ನೀವು ಬಳಸುವ ಹಕ್ಕನ್ನು (ಅಥವಾ ಉಪ ಪರವಾನಗಿಯ ಪೂರೈಕೆ) ನಿಮಗೆ ನಿಯೋಜಿಸಲಾಗುವುದಿಲ್ಲ, ಸಾಫ್ಟ್‌ವೇರ್ ಅನ್ನು ಬಳಸಲು ಸುರಕ್ಷಾ ಹಿತಾಸಕ್ತಿಯನ್ನು ನಿಮ್ಮ ಹಕ್ಕಿನ ಮೇಲೆ ಪೂರೈಸಲು, ಅಥವಾ ಸಾಫ್ಟ್‌ವೇರ್ ಅನ್ನು ಬಳಸಲು ಅಥವಾ ನಿಮ್ಮ ಹಕ್ಕಿನ ಯಾವುದೇ ಭಾಗವನ್ನು ವರ್ಗಾವಣೆ ಮಾಡಲು ಮಾಡುವಂತಿಲ್ಲ.

11. ನಿಮ್ಮಿಂದ ವಿಷಯದ ಪರವಾನಗಿ

11.1 ನೀವು ಸೇವೆಯಿಂದ ಅಥವಾ ಸೇವೆಯ ಮೂಲಕ ಸಲ್ಲಿಸುವ, ಪೋಸ್ಟ್ ಮಾಡುವ ಅಥವಾ ಪ್ರದರ್ಶಿಸುವ ವಿಷಯಕ್ಕೆ ನೀವು ಈಗಾಗಲೇ ಕೃತಿಸ್ವಾಮ್ಯ ಮತ್ತು ಇತರ ಹಕ್ಕುಗಳನ್ನು ನೀವು ಉಳಿಸಿಕೊಂಡಿದ್ದೀರಿ.

12. ಸಾಫ್ಟ್‌ವೇರ್ ನವೀಕರಣಗಳು

12.1 ನೀವು ಬಳಸುವ ಸಾಫ್ಟ್‌ವೇರ್ Google ನಿಂದ ಕಾಲಕಾಲಕ್ಕೆ ಸ್ವಯಂಚಾಲಿತವಾಗಿ ಡೌನ್ಲೋಡ್ ಆಗಬಹುದು ಮತ್ತು ನವೀಕರಣಗಳನ್ನು ಸ್ಥಾಪಿಸಬಹುದು. ಈ ನವೀಕರಣಗಳು ಅಭಿವೃದ್ಧಿ, ವಿಸ್ತರಣೆ ಮತ್ತು ಸೇವೆಗಳ ಮತ್ತಷ್ಟು ಬೆಳವಣಿಗೆಗಾಗಿ ವಿನ್ಯಾಸ ಮಾಡಲಾಗಿದ್ದು, ಮತ್ತು ಕೆಲವೊಮ್ಮೆ ಬಗ್ ದುರಸ್ತಿಮಾಡಲು, ವರ್ಧಿತ ಕ್ರಿಯೆಗಳು, ಹೊಸ ಸಾಫ್ಟ್‌ವೇರ್ ಮಾಡ್ಯೂಲ್ಗಳು ಮತ್ತು ಸಂಪೂರ್ಣ ಹೊಸ ಆವೃತ್ತಿಗಳ ರೂಪವನ್ನು ಪಡೆದುಕೊಳ್ಳುತ್ತವೆ. ನಿಮ್ಮ ಸೇವೆಗಳ ಬಳಕೆಯ ಭಾಗವೆಂಬಂತೆ ನೀವು ಇಂತಹ ನವೀಕರಣಗಳನ್ನು (ಮತ್ತು ನಿಮಗೆ ಇದನ್ನು ಒದಗಿಸಲು Google ಗೆ ಅನುಮತಿ ನೀಡಬೇಕು) ಸ್ವೀಕರಿಸಲು ಒಪ್ಪುತ್ತೀರಿ.

13. Google ನೊಂದಿಗೆ ನಿಮ್ಮ ಸಂಬಂಧವನ್ನು ಕೊನೆಗೊಳಿಸುವಿಕೆ

13.1 ಕೆಳಗೆ ನೀಡಿದಂತೆ ನೀವು ಅಥವಾ Google ಮುಕ್ತಾಯಗೊಳಿಸುವವರೆಗೆ ನಿಯಮಗಳ ಅನ್ವಯವು ಮುಂದುವರಿಯುವುದು.

13.2 Google ನೊಂದಿಗಿನ ನಿಮ್ಮ ಕಾನೂನುಬದ್ದ ಒಪ್ಪಂದವನ್ನು ನಿಲ್ಲಿಸಲು ನೀವು ಬಯಸಿದರೆ, (a) ಯಾವುದೇ ಸಮಯದಲ್ಲಿ Google ಗೆ ಸೂಚಿಸುವುದು ಮತ್ತು (b) ನೀವು ಬಳಸುವ ಎಲ್ಲಾ ಸೇವೆಗಳಿಗಾಗಿ ರಚಿಸಿರುವ ನಿಮ್ಮ ಖಾತೆಗಳನ್ನು ಈ ಆಯ್ಕೆಯನ್ನು Google ನಿಮಗೆ ಲಭ್ಯವಿರುವಂತೆ ಮಾಡಿರುವ ಸ್ಥಳದಲ್ಲಿ ಮುಚ್ಚುವ ಮೂಲಕ ನೀವು ಅವುಗಳ ಬಳಕೆಯನ್ನು ನಿಲ್ಲಿಸಬಹುದು. ನಿಮ್ಮ ಸೂಚನೆಯನ್ನು ಈ ನಿಯಮಗಳ ಪ್ರಾರಂಭದಲ್ಲಿ ಹೊಂದಿಸಿದ Google ನ ವಿಳಾಸಕ್ಕೆ ಲಿಖಿತ ರೂಪದಲ್ಲಿ ಕಳುಹಿಸಬೇಕು.

13.3 Google ಯಾವುದೇ ಸಮಯದಲ್ಲಿ ನಿಮ್ಮೊಂದಿಗಿರುವ ಅದರ ಕಾನೂನು ಒಪ್ಪಂದವನ್ನು ಮುಕ್ತಾಯಗೊಳಿಸಬಹುದು ಅಂದರೆ:

(A) ನೀವು ನಿಯಮಗಳ ಯಾವುದೇ ಕರಾರುಗಳನ್ನು ಉಲ್ಲಂಘಿಸಿದ್ದರೆ (ಅಥವಾ ನಿಮಗೆ ನಿಯಮಗಳ ಕರಾರುಗಳನ್ನು ಅನುವರ್ತಿಸುವ ಉದ್ದೇಶವಿಲ್ಲ ಎಂಬ ರೀತಿಯಲ್ಲಿ ವರ್ತಿಸಿದ್ದರೆ, ಅಥವಾ ನಿಯಮಗಳ ಕರಾರುಗಳನ್ನು ಅನುಸರಿಸಲು ಸಾಧ್ಯವಾಗದಿದ್ದರೆ); ಅಥವಾ

(B) ನಿಯಾಮಾನುಸಾರ Google ಗೆ ಇದನ್ನು ಮಾಡಬೇಕಾದ ಅವಶ್ಯಕತೆ ಬಂದರೆ (ಉದಾಹರಣೆಗೆ, ನಿಮಗಿರುವ ಸೇವೆಗಳ ಒದಗಿಸುವಿಕೆ ಕಾನೂನು ಬಾಹಿರವಾದರೆ); ಅಥವಾ

(C) ಯಾರ ಪಾಲುದಾರಿಕೆಯಲ್ಲಿ Google ನಿಮಗೆ ಸೇವೆಯನ್ನು ನೀಡಿದೆಯೋ ಅವರು Google ನೊಂದಿಗೆ ಇರುವ ಸಂಬಂಧವನ್ನು ಮುಕ್ತಾಯಗೊಳಿಸಿದ್ದರೆ ಅಥವಾ ನಿಮಗಿರುವ ಸೇವೆಗಳನ್ನು ನಿಲ್ಲಿಸಿದ್ದರೆ; ಅಥವಾ

(D) ನೀವು ವಾಸಿಸುವ ಅಥವಾ ಸೇವೆಗಳನ್ನು ಬಳಸುವ ದೇಶದಲ್ಲಿ ಇನ್ನು ಮುಂದೆ ಬಳಕೆದಾರರಿಗೆ ಸೇವೆಗಳನ್ನು ಒದಗಿಸುವುದನ್ನು Google ಬದಲಾಯಿಸಿದ್ದರೆ; ಅಥವಾ

(E) Google ನ ಅಭಿಪ್ರಾಯದಂತೆ, Google ಸೇವೆಯ ಒದಗಿಸುವಿಕೆ, ಇನ್ನು ಮುಂದೆ ವಾಣಿಜ್ಯಿಕವಾಗಿ ಸುಗಮವಾಗಿರದಿದ್ದರೆ.

13.4 ಈ ಪರಿಚ್ಛೇದದಲ್ಲಿರುವ ಯಾವುದೇ ನಿಯಮಗಳ ಪರಿಚ್ಛೇದ 4 ರಡಿಯಲ್ಲಿನ ಸೇವೆಗಳ ಸೌಲಭ್ಯ ಸಂಬಂಧಿತ Google ನ ಹಕ್ಕುಗಳ ಮೇಲೆ ಪರಿಣಾಮ ಬೀರುವುದಿಲ್ಲ.

13.5 ಈ ನಿಬಂಧನೆಗಳು ಮುಗಿಯುವಾಗ, ಎಲ್ಲಾ ಕಾನೂನು ಹಕ್ಕುಗಳು, ನೀವು ಮತ್ತು Google ಪ್ರಯೋಜನ ಪಡೆದಂತಹ ಕರ್ತವ್ಯ ಮತ್ತು ಭಾದ್ಯತೆಗಳಿಗೆ (ಅಥವಾ ನಿಬಂಧನೆಗಳು ಚಾಲ್ತಿಯಲ್ಲಿರುವಾಗ ಕಾಲಾಂತರದಲ್ಲಿ ಹೆಚ್ಚಾದರೆ) ಅಥವಾ ಅವುಗಳು ಅನಿರ್ದಿಷ್ಟವಾಗಿ ಮುಂದುವರಿಸಲು ವ್ಯಕ್ತಪಡಿಸಿದರೆ, ಈ ನಿಲುಗಡೆಯಿಂದಾಗಿ ಪರಿಣಾಮವಾಗುವುದಿಲ್ಲ, ಮತ್ತು ಪ್ಯಾರಾಗ್ರಾಫ್ 20.7 ರ ಸೌಲಭ್ಯಗಳು ಇಂತಹ ಹಕ್ಕುಗಳಿಗೆ, ಕರ್ತವ್ಯಗಳಿಗೆ ಮತ್ತು ಭಾಧ್ಯತೆಗಳಿಗೆ ಅನಿರ್ದಿಷ್ಟವಾಗಿ ಅನ್ವಯವಾಗುವುವು.

14. ವಾರಂಟಿಗಳ ಪ್ರತ್ಯೇಕಿಸುವಿಕೆ

14.1 ಪರಿಚ್ಛೇದ 14 ಮತ್ತು 15 ಅನ್ನು ಸೇರಿಸಿದಂತೆ ಈ ನಿಯಮಗಳಲ್ಲಿ ಯಾವುದೂ GOOGLE ನ, ಅನ್ವಯಿಸಲ್ಪಡುವ ಕಾನೂನಿನ ಪ್ರಕಾರವಾಗಿ ಪ್ರತ್ಯೇಕಿಸುವ, ವಾರಂಟಿಯನ್ನು ಅಥವಾ ನಷ್ಟದ ಬಾಧ್ಯತೆಗಳನ್ನು ಹೊರತಾಗಿಸುವುದನ್ನು ಅಥವಾ ಮಿತಗೊಳಿಸುವುದನ್ನು ಮಾಡಲಾರದು. ನಿರ್ಲಕ್ಷ್ಯ, ಒಪ್ಪಂದ ಉಲ್ಲಂಘನೆ ಅಥವಾ ಪರೋಕ್ಷವಾಗಿ ಅನ್ವಯವಾಗುವ ನಿಯಮಗಳ ಉಲ್ಲಂಘನೆಯಿಂದ ಉಂಟಾದ ಹಾನಿ ಅಥವಾ ಪ್ರಾಸಂಗಿಕ ಅಥವಾ ಸಾಂದರ್ಭಿಕ ಹಾನಿಗಳಿಗೆ ಅಥವಾ ನಷ್ಟಕ್ಕೆ ಕೆಲವು ನ್ಯಾಯಾಲಯಗಳ ವ್ಯಾಪ್ತಿಗಳು ಕೆಲವು ನಿರ್ದಿಷ್ಟ ವಾರಂಟಿಗಳು ಮತ್ತು ಪರಿಸ್ಥಿತಿಗಳನ್ನು ಹೂರಗಿಡಲು ಅಥವಾ ಹೊಣೆಗಾರಿಕೆಯ ಮಿತಿ ಮತ್ತು ಹೊರಗಿಡುವಿಕೆಗೆ ಅನುಮತಿ ನೀಡುವುದಿಲ್ಲ. ಅಂತೆಯೇ, ನಿಮ್ಮ ನ್ಯಾಯಾಲಯ ವ್ಯಾಪ್ತಿಯಲ್ಲಿ ಕಾನೂನು ಬದ್ದವಾಗಿರುವ ಮಿತಿಗಳು ಮಾತ್ರ ನಿಮಗೆ ಅನ್ವಯವಾಗುತ್ತವೆ ಮತ್ತು ನಿಮ್ಮ ಹೊಣೆಗಾರಿಕೆಯ ಮಿತಿಯು ಕಾನೂನು ಸಮ್ಮತವಾದ ಗರಿಷ್ಠ ಮಟ್ಟಕ್ಕೆ ಸೀಮಿತವಾಗಿರುತ್ತದೆ.

14.2 ನಿಮ್ಮ ಸೇವೆಯ ಬಳಕೆಗೆ ನೀವೇ ಪೂರ್ಣ ಜವಾಬ್ದಾರಿ ಮತ್ತು ಆ ಸೇವೆಗಳು "ಇದ್ದದ್ದು ಇದ್ದಂತೆ " ಮತ್ತು “ಲಭ್ಯವಿದ್ದಂತೆ” ಒದಗಿಸಲಾಗಿದೆ ಎಂಬುದನ್ನು ವ್ಯಕ್ತವಾಗಿ ತಿಳಿದಿದ್ದೀರಿ ಮತ್ತು ಒಪ್ಪುತ್ತೀರಿ.

14.3 ನಿರ್ದಿಷ್ಟವಾಗಿ, GOOGLE, ಅದರ ಅಧೀನ ಸಂಸ್ಥೆಗಳು ಮತ್ತು ಅಂಗ ಸಂಸ್ಥೆಗಳು, ಹಾಗೂ ಅದರ ಪರವಾನಗಿದಾರರು ಈ ಕೆಳಗಿನಂತೆ ನಿಮ್ಮನ್ನು ಪ್ರತಿನಿಧಿಸುವುದಿಲ್ಲ ಅಥವಾ ಪ್ರಮಾಣೀಕರಿಸುವುದಿಲ್ಲ:

(A) ಸೇವೆಗಳ ಬಳಕೆಯು ನಿಮ್ಮ ಆವಶ್ಯಕತೆಗಳನ್ನು ಪೂರೈಸುತ್ತದೆ,

(B) ನಿಮ್ಮಿಂದ ಸೇವೆಗಳ ಬಳಕೆಯು ಅಡ್ಡಿಯಿಲ್ಲದ, ಸಕಾಲಿಕವಾಗಿರುತ್ತದೆ, ಸುರಕ್ಷಿತ ಅಥವಾ ದೋಷ ಮುಕ್ತವಾಗಿರುತ್ತದೆ.

(C) ನಿಮ್ಮ ಸೇವೆಯ ಬಳಕೆಯ ಫಲಿತಾಂಶವೆಂಬಂತೆ ನೀವು ಪಡೆದ ಯಾವುದೇ ಮಾಹಿತಿಯು ನಿಖರ ಅಥವಾ ವಿಶ್ವಾಸಾರ್ಹವಾಗಿರುತ್ತದೆ, ಹಾಗೂ

(D) ನಿಮಗೆ ಒದಗಿಸಿದ ಯಾವುದೇ ಸಾಫ್ಟ್ವೇರ್ನ ಕಾರ್ಯಾಚರಣೆಯಲ್ಲಿ ಅಥವಾ ಕ್ರಿಯಾತ್ಮಕತೆಯಲ್ಲಿ ಕೊರತೆ ಕಂಡುಬಂದರೆ ಸೇವೆಗಳ ಅಂಗವೆಂಬಂತೆ ಅದನ್ನು ಸರಿಪಡಿಸಲಾಗುವುದು.

14.4 ಸೇವೆಗಳನ್ನು ಬಳಸಿ ಯಾವುದೇ ವಿಷಯವನ್ನು ಡೌನ್ಲೋಡ್ ಮಾಡಿದ್ದರೆ ಅಥವಾ ಪಡೆದಿದ್ದರೆ ಅದನ್ನು ನೀವು ನಿಮ್ಮ ವಿವೇಚನೆ ಮತ್ತು ಜವಾಬ್ದಾರಿಯಿಂದ ಮಾಡಿದ್ದೀರಿ, ಮತ್ತು ಅಂತಹ ವಿಷಯಗಳನ್ನು ಡೌನ್ಲೋಡ್ ಮಾಡಿದ ಪರಿಣಾಮವಾಗಿ ನಿಮ್ಮ ಯಾವುದೇ ಕಂಪ್ಯೂಟರ್ ಸಿಸ್ಟಮ್ ಅಥವಾ ಇತರ ಸಾಧನಗಳಿಗೆ ಯಾವುದೇ ಹಾನಿ ಅಥವಾ ಡೇಟಾದ ನಷ್ಟ ಸಂಭವಿಸಿದರೆ ಅದಕ್ಕೆ ನೀವೇ ಜವಾಬ್ದಾರರು.

14.5 GOOGLE ನಿಂದ ಅಥವಾ ಆ ಮೂಲಕ ಅಥವಾ ಸೇವೆಗಳಿಂದ ಯಾವುದೇ ಸಲಹೆ ಅಥವಾ ಮಾಹಿತಿ, ಮೌಖಿಕ ಅಥವಾ ಲಿಖಿತವಾಗಿ ನೀವು ಪಡೆದಿದ್ದರೆ ಅವುಗಳು ನಿಯಮಗಳಲ್ಲಿ ವ್ಯಕ್ತವಾಗಿ ಹೇಳಿರದ ಯಾವುದೇ ವಾರಂಟಿಯನ್ನು ಸೃಷ್ಟಿಸಲಾರದು.

14.6 ವ್ಯಕ್ತ ಅಥವಾ ಅವ್ಯಕ್ತವಾದವುಗಳನ್ನು ಒಳಗೊಂಡಂತೆ, ಅನ್ವಯವಾಗುವ ವಾರೆಂಟಿಗಳಿಗೆ ಮತ್ತು ಮರ್ಚೆಂಟೆಬಿಲಿಟಿ, ಒಂದು ನಿರ್ದಿಷ್ಟವಾದ ಉದ್ದೇಶಕ್ಕಾಗಿ ಹೊಂದಿಕೊಳ್ಳುವಿಕೆ ಮತ್ತು ಉಲ್ಲಂಘನೆಯಾಗದಿರುವುದಕ್ಕೆ ನಿಯಮಿತವಾಗಿ ಮತ್ತು ಅಷ್ಟೇ ಅಲ್ಲದೆ ಯಾವುದೇ ರೀತಿಯ ಎಲ್ಲ ವಾರೆಂಟಿಗಳು ಮತ್ತು ಹಕ್ಕುಗಳನ್ನು GOOGLE ಇನ್ನಷ್ಟು ವ್ಯಕ್ತವಾಗಿ ನಿರಾಕರಿಸುತ್ತದೆ.

15. ಬಾಧ್ಯತೆಯ ಮಿತಿಗಳು

15.1 ಮೇಲಿರುವ ಪ್ಯಾರಾಗ್ರಾಫ್14.1 ರಲ್ಲಿರುವ ಎಲ್ಲಾ ಕರಾರಿನ ವಿಷಯವಸ್ತುಗಳಿಗೆ ಸಂಬಂಧಿಸಿದಂತೆ, GOOGLE, ಅದರ ಅಧೀನ ಸಂಸ್ಥೆಗಳು ಮತ್ತು ಅಂಗ ಸಂಸ್ಥೆಗಳು ಹಾಗೂ ಅದರ ಪರವಾನಗಿದಾರರು ನಿಮಗೆ ಬಾಧ್ಯತೆ ಹೊಂದಿರುವುದಿಲ್ಲ ಎಂದು ನೀವು ವ್ಯಕ್ತವಾಗಿ ತಿಳಿದಿದ್ದೀರಿ ಮತ್ತು ಒಪ್ಪುತ್ತೀರಿ. ಯಾವುದಕ್ಕೆಂದರೆ:

(A) ನೀವು ಯಾವುದೇ ಪ್ರತ್ಯಕ್ಷ, ಪರೋಕ್ಷ, ಪ್ರಾಸಂಗಿಕ, ವಿಶೇಷವಾಗಿ ಮುಖ್ಯವಾದ ಅಥವಾ ಮಾದರಿಯಂತೆ ಹಾನಿಗೀಡಾಗಿದ್ದರೆ, ಯಾವುದೇ ಬಾಧ್ಯತೆಗಳ ಮೇಲೆ ಹಾನಿ ಸಂಭವಿಸಿದ್ದರೆ, ಇದು ಒಳಪಡಬಹುದು.. ಯಾವುದೇ ಲಾಭಾಂಶದ ನಷ್ಟ (ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಹಾನಿಗೀಡಾಗಿದ್ದರೆ), ಯಾವುದೇ ವ್ಯಾಪಾರದ ವಿಶ್ವಾಸದ ಅಥವಾ ವ್ಯವಹಾರದ ಪ್ರಖ್ಯಾತಿಗೆ ಹಾನಿ, ಯಾವುದೇ ಡೇಟಾದ ನಷ್ಟವನ್ನು ಅನುಭವಿಸಿದ್ದರೆ, ಬದಲೀ ಸರಕುಗಳ ಅಥವಾ ಸೇವೆಗಳ ಪ್ರಾಪ್ತಿಯ ದರ, ಅಥವಾ ಇತರ ಅವ್ಯಕ್ತವಾದ ನಷ್ಟ ಈ ಎಲ್ಲವನ್ನು, ಆದರೆ ಅಷ್ಟಕ್ಕೇ ನಿಯಮಿತವಿಲ್ಲದೆ, ಇದು ಒಳಗೊಂಡಿರುತ್ತದೆ;

(B) ಈ ಕೆಳಗಿನ ರೀತಿಯ ಫಲಿತಾಂಶಗಳಿಂದಾಗಿ ನಿಮಗೆ ಯಾವುದೇ ನಷ್ಟ ಅಥವಾ ಹಾನಿ ಸಂಭವಿಸಿದ್ದರೆ, ಮತ್ತು ಅಷ್ಟಕ್ಕೆ ನಿಯಮಿತವಿಲ್ಲದೆ ನಷ್ಟ ಅಥವಾ ಹಾನಿ:

(I) ಸೇವೆಯಲ್ಲಿ ಗೋಚರಿಸುವ ಯಾವುದೇ ಜಾಹೀರಾತಿನ ಪೂರ್ಣತೆ, ನಿಖರತೆ ಅಥವಾ ಅಸ್ತಿತ್ವದ ಕುರಿತ ನಿಮ್ಮ ವಿಶ್ವಾಸದ ಪರಿಣಾಮವಾಗಿ, ಅಥವಾ ಸೇವೆಗಳಲ್ಲಿ ಗೋಚರಿಸುವಂತಹ ಯಾವುದೇ ನಿಮ್ಮ ಹಾಗೂ ಜಾಹೀರಾತುದಾರರ ಅಥವಾ ಪ್ರಾಯೋಜಕರ ನಡುವಿನ ಯಾವುದೇ ವಹಿವಾಟು ಅಥವಾ ಸಂಬಂಧದ ಪರಿಣಾಮವಾಗಿ;

(II) ಸೇವೆಯಲ್ಲಿ GOOGLE ಮಾಡಬಹುದಾದ ಯಾವುದೇ ಬದಲಾವಣೆಗಳು, ಅಥವಾ ಸೇವೆಗಳ ಸೌಲಭ್ಯದ ಯಾವುದೇ ಶಾಶ್ವತ ಅಥವಾ ತಾತ್ಕಾಲಿಕ ನಿಲುಗಡೆಯಿಂದಾಗಿ (ಅಥವಾ ಸೇವೆಯಲ್ಲಿರುವ ಯಾವುದೇ ವೈಶಿಷ್ಟ್ಯಗಳು);

(III) ಸೇವೆಯ ಬಳಕೆಯಿಂದಾಗಿ, ಡೇಟಾ ನಿರ್ವಹಿಸುವ ಅಥವಾ ಇತರ ಸಂವಹನಗಳಿಂದಾಗಿ ಯಾವುದೇ ವಿಷಯದ ಅಳಿಸುವಿಕೆ, ಹಾಳಾಗುವಿಕೆ, ಅಥವಾ ಸಂಗ್ರಹ ವೈಫಲ್ಯತೆ ಮತ್ತು;

(IV) GOOGLE ಗೆ ಖಾತೆಯ ನಿಖರವಾದ ಮಾಹಿತಿಯನ್ನು ಒದಗಿಸುವಲ್ಲಿ ನಿಮ್ಮ ವೈಫಲ್ಯ;

(V) ನಿಮ್ಮ ಪಾಸ್‌ವರ್ಡ್ ಅಥವಾ ಖಾತೆಯ ವಿವರಗಳನ್ನು ಸುರಕ್ಷಿತ ಮತ್ತು ಗೌಪ್ಯವಾಗಿ ಕಾಪಾಡಿಕೊಳ್ಳಲು ನೀವು ವಿಫಲರಾದರೆ;

15.2 ಮೇಲಿರುವ ಪ್ಯಾರಾಗ್ರಾಫ್ 15.1 ರಲ್ಲಿರುವ GOOGLE ನ ಬಾಧ್ಯತೆಯ ಮಿತಿಗಳು, GOOGLE ಗೆ ಸಲಹೆ ಮಾಡಿದ್ದರೂ ಅಥವಾ ಇಲ್ಲದಿದ್ದರೂ, ಅಥವಾ ಅಂತಹ ನಷ್ಟಗಳು ಆಗಬಹುದಾದ ಸಾಧ್ಯತೆಯ ಕುರಿತು ಎಚ್ಚರ ವಹಿಸಬಹುದಾಗಿತ್ತಾದರೂ ಅನ್ವಯಿಸುತ್ತದೆ.

16. ಕೃತಿಸ್ವಾಮ್ಯ ಮತ್ತು ವ್ಯಾಪಾರ ಮುದ್ರೆ ನೀತಿಗಳು

16.1 ಅನ್ವಯಿತ ಅಂತಾರಾಷ್ಟ್ರೀಯ ಬೌದ್ಧಿಕ ಆಸ್ತಿ ನಿಯಮದಂತೆ (ಯುನೈಟೆಡ್ ಸ್ಟೇಟ್ಸ್, ಡಿಜಿಟಲ್ ಮಿಲೇನಿಯಂ ಕೃತಿಸ್ವಾಮ್ಯ ಕಾಯ್ದೆ ಒಳಗೊಂಡಂತೆ) ಕೃತಿಸ್ವಾಮ್ಯ ಉಲ್ಲಂಘನೆಯ ಆಪಾದನೆಯ ಪ್ರಕಟಣೆಗಳಿಗೆ ಪ್ರತಿಕ್ರಿಯೆ ನೀಡುವ ಮತ್ತು ಪುನರಾವರ್ತಿತ ಉಲ್ಲಂಘನೆಗಳನ್ನು ಮಾಡಿದ ಖಾತೆಗಳನ್ನು ನಿರ್ನಾಮ ಮಾಡುವುದು Google ನ ನೀತಿಯಾಗಿದೆ. Google ನ ನೀತಿಯ ವಿವರಗಳು http://www.google.com/dmca.h tml ನಲ್ಲಿ ಲಭ್ಯ.

16.2 Googleನ ಜಾಹೀರಾತು ವ್ಯವಹಾರದಲ್ಲಿನ ವ್ಯಾಪಾರ ಮುದ್ರೆಯ ದೂರುಗಳ ಪ್ರಕ್ರಿಯೆ ಕಾರ್ಯನಿರ್ವಹಣೆಯನ್ನು Google ನಿರ್ವಹಿಸುತ್ತದೆ, ಇವುಗಳ ವಿವರಗಳನ್ನು http://www.google.co m/tm_complaint.html ನಲ್ಲಿ ನೋಡಬಹುದು.

17. ಜಾಹೀರಾತುಗಳು

17.1 ಈ ಕೆಲವು ಸೇವೆಗಳು ಜಾಹೀರಾತಿನಿಂದ ಬೆಂಬಲಿಸಲ್ಪಟ್ಟು ಕಾರ್ಯನಿರ್ವಹಿಸುತ್ತಿರಬಹುದು ಮತ್ತು ಹಾಗಾಗಿ ಜಾಹೀರಾತುಗಳನ್ನು ಪ್ರಕಟಿಸುತ್ತಿರಬಹುದು.ಈ ಜಾಹೀರಾತುಗಳು ಸೇವೆಗಳಲ್ಲಿ ಸಂಗ್ರಹಿಸಿದ ಮಾಹಿತಿಯ ವಿಷಯವನ್ನು, ಸೇವೆಗಳ ಅಥವಾ ಇತರ ಮಾಹಿತಿಗಳ ಮೂಲಕ ಮಾಡಲಾದ ಪ್ರಶ್ನೆಗಳನ್ನು ಗುರಿಯಾಗಿಟ್ಟುಕೊಂಡಿರಬಹುದು.

17.2 ಸೇವೆಗಳಲ್ಲಿನ Google ನ ಜಾಹೀರಾತಿನ ವಿಧಾನ, ಮೋಡ್ ಮತ್ತು ಜಾಹೀರಾತಿನ ಹರವುಗಳು ನಿಮಗೆ ನಿರ್ದಿಷ್ಟ ಪ್ರಕಟಣೆಯನ್ನು ನೀಡದೆಯೆ ಬದಲಾಗಬಹುದು

17.3 ನಿಮ್ಮ ಅಪೇಕ್ಷೆಯಂತೆ Google ಸೇವೆಗಳ ಪ್ರವೇಶ ಮತ್ತು ಬಳಕೆಯನ್ನು ಪೂರೈಸುವುದರಿಂದ, Google ನಂತಹ ಜಾಹೀರಾತುಗಳನ್ನು ಸೇವೆಗಳಲ್ಲಿರಿಸುವುದನ್ನು ನೀವು ಒಪ್ಪಿಕೊಳ್ಳಬೇಕು.

18. ಇತರ ವಿಷಯ

18.1 ಸೇವೆಗಳು ಇತರ ವೆಬ್‌ಸೈಟ್‌ಗಳಿಗೆ ಅಥವಾ ವಿಷಯ ಅಥವಾ ಸಂಪನ್ಮೂಲಗಳಿಗೆ ಹೈಪರ್‌ಲಿಂಕ್‌ಗಳನ್ನು ಒಳಗೊಂಡಿರಬಹುದು. Google ನ ಹೊರತಾದ ವ್ಯಕ್ತಿ ಅಥವಾ ಕಂಪನಿಯವರು ಒದಗಿಸಿರುವ ಯಾವುದೇ ವೆಬ್‌ಸೈಟ್‌ಗಳು ಅಥವಾ ಸಂಪನ್ಮೂಲಗಳ ಮೇಲೆ Google ಗೆ ನಿಯಂತ್ರಣವಿರುವುದಿಲ್ಲ.

18.2 ಅಂತಹ ಯಾವುದೇ ಬಾಹ್ಯ ಸೈಟ್‌ಗಳಿಗೆ ಅಥವಾ ಸಂಪನ್ಮೂಲಗಳ ಲಭ್ಯತೆಗೆ ಹಾಗೂ ಯಾವುದೇ ಜಾಹೀರಾತುಗಳಿಗೆ Google ಜವಾಬ್ದಾರವಲ್ಲ, ಹಾಗೂ ಅಂತಹ ವೆಬ್‌ಸೈಟ್‌ಗಳು ಅಥವಾ ಸಂಪನ್ಮೂಲಗಳಿಂದಿರುವ ಅಥವಾ ಲಭ್ಯವಾಗುವ ಉತ್ಪನ್ನಗಳು ಅಥವಾ ಇತರ ವಸ್ತುಗಳನ್ನು Google ಸಮರ್ಥಿಸುವುದಿಲ್ಲ ಎಂಬುವುದನ್ನು ನೀವು ಸಮ್ಮತಿಸುತ್ತೀರಿ ಮತ್ತು ಒಪ್ಪುತ್ತೀರಿ.

18.3 ಅಂತಹ ಬಾಹ್ಯ ಸೈಟ್‌ಗಳ ಅಥವಾ ಸಂಪನ್ಮೂಲಗಳ ಲಭ್ಯತೆಯ ಪರಿಣಾಮವಾಗಿ ಅಥವಾ ಅವುಗಳ ಪೂರ್ಣತೆ, ನಿಖರತೆ ಮತ್ತು ಜಾಹೀರಾತಿನ, ಉತ್ಪನ್ನಗಳ ಅಥವಾ ಇತರೆ ವಸ್ತುಗಳ ಅಸ್ತಿತ್ವದ ಕುರಿತಂತೆ ನೀವಿರಿಸಿದ ಭರವಸೆಯಿಂದಾಗಿ ನಿಮಗೆ ಯಾವುದೇ ನಷ್ಟ ಅಥವಾ ಹಾನಿ ಸಂಭವಿಸಿದಲ್ಲಿ Google ಇವುಗಳಿಗೆ ಹೊಣೆಗಾರಿಕೆ ಹೊಂದಿಲ್ಲ ಎಂಬದನ್ನು ನೀವು ಸಮ್ಮತಿಸುತ್ತೀರಿ ಮತ್ತು ಒಪ್ಪುತ್ತೀರಿ.

19. 18. ನಿಯಮಗಳಿಗೆ ಬದಲಾವಣೆಗಳು

19.1 Google ಕಾಲಕಾಲಕ್ಕೆ ತಕ್ಕಂತೆ ಸಾರ್ವತ್ರಿಕ ನಿಯಮಗಳು ಮತ್ತು ಹೆಚ್ಚುವರಿ ನಿಯಮಗಳನ್ನು ಬದಲಾವಣೆಗಳನ್ನು ಮಾಡಬಹುದು. ಈ ಬದಲಾವಣೆಗಳನ್ನು ಮಾಡಿದಾಗ, Google http://www.google.com/accounts/TOS?hl=en ನಲ್ಲಿ ಲಭ್ಯವಿರುವ ಸಾರ್ವತ್ರಿಕ ನಿಯಮಗಳ ಹೊಸ ಪ್ರತಿಯನ್ನು ಮಾಡುತ್ತದೆ ಮತ್ತು ಅದರ ಒಳಗೆ ಅಥವಾ ಪರಿಣಾಮಗೊಂಡ ಸೇವೆಗಳ ಮೂಲಕ ನಿಮಗೆ ಯಾವುದೇ ಹೊಸ ಹೆಚ್ಚುವರಿ ನಿಯಮಗಳನ್ನು ಲಭ್ಯವಾಗುವಂತೆ ಮಾಡಲಾಗುತ್ತದೆ.

19.2 ಜಾಗತಿಕ ನಿಬಂಧನೆ ಅಥವಾ ಹೆಚ್ಚುವರಿ ನಿಬಂಧನೆಗಳನ್ನು ಬದಲಿಸಿದ ನಂತರದ ದಿನದಲ್ಲಿ ನೀವು ಸೇವೆಗಳನ್ನು ಬಳಸುತ್ತಿದ್ದರೆ, Google ನಿಮ್ಮ ಬಳಕೆಯನ್ನು ನವೀಕರಿಸಿದ ಜಾಗತಿಕ ನಿಬಂಧನೆ ಅಥವಾ ಹೆಚ್ಚುವರಿ ನಿಬಂಧನೆಗಳ ಸಮ್ಮತಿಯೆಂಬಂತೆ ಪರಿಗಣಿಸುವುದು.

20. ಸಾಮಾನ್ಯ ಕಾನೂನು ನಿಯಮಗಳು

20.1 ಕೆಲವೊಮ್ಮೆ ನೀವು ಸೇವೆಗಳನ್ನು ಬಳಸುವಾಗ, ನೀವು (ಸೇವೆಗಳನ್ನು ಬಳಸುವುದರ ಅಥವಾ ಅದರ ಪರಿಣಾಮವಾಗಿ) ಸೇವೆಯೊಂದನ್ನು ಬಳಸಬಹುದು ಅಥವಾ ಸಾಫ್ಟ್‌ವೇರ್‌ನ ಭಾಗವೊಂದನ್ನು ಡೌನ್ಲೋಡ್ ಮಾಡಬಹುದು ಅಥವಾ ಸೇವೆಯನ್ನು, ಅಥವಾ ಇತರ ವ್ಯಕ್ತಿ ಅಥವಾ ಕಂಪನಿಯಿಂದ ಒದಗಿಸಲ್ಪಟ್ಟಂತಹ ಸರಕುಗಳನ್ನು ಖರೀದಿಸಬಹುದು. ಇಂತಹ ಇತರ ಸೇವೆಗಳ, ಸಾಫ್ಟ್‌ವೇರ್ ಅಥವಾ ಸರಕುಗಳ ನಿಮ್ಮ ಬಳಕೆ, ನಿಮ್ಮ ಮತ್ತು ಕಂಪನಿ ಅಥವಾ ಆ ವ್ಯಕ್ತಿಗೆ ಸಂಬಂಧಿಸಿದಂತೆ ಪ್ರತ್ಯೇಕ ನಿಯಮಕ್ಕೆ ಒಳಪಡುತ್ತದೆ. ಹಾಗಿದ್ದಲ್ಲಿ, ಇತರ ಕಂಪನಿಗಳೊಂದಿಗೆ ಮತ್ತು ವ್ಯಕ್ತಿಗಳೊಂದಿಗಿನ ನಿಮ್ಮ ಕಾನೂನು ಸಂಬಂಧದ ಮೇಲೆ ಈ ನಿಯಮಗಳು ಪರಿಣಾಮ ಬೀರುವುದಿಲ್ಲ.

20.2 ಈ ನಿಯಮಗಳು ನಿಮ್ಮ ಮತ್ತು Google ನಡುವೆ ಸಂಪೂರ್ಣ ಕಾನೂನು ಒಪ್ಪಂದವನ್ನು ಹೊಂದಿರುತ್ತದೆ ಮತ್ತು ನಿಮ್ಮ ಸೇವೆಗಳ ಬಳಕೆಯ ಮೇಲೆ ಪ್ರಭಾವ ಬೀರುತ್ತದೆ (ಆದರೆ, ಪ್ರತ್ಯೇಕ ಲಿಖಿತ ಒಪ್ಪಂದದಡಿಯಲ್ಲಿ Google ನಿಮಗೆ ಒದಗಿಸಬಹುದಾದ ಸೇವೆಗಳನ್ನು ಹೊರಪಡಿಸಿ), ಹಾಗೂ ಸೇವೆಗಳ ಸಂಬಂಧಿತ ಯಾವುದೇ ಪೂರ್ವ ಒಪ್ಪಂದವು ನಿಮ್ಮ ಮತ್ತು Google ನಡುವೆ ಇದ್ದರೆ ಅದನ್ನು ಸಂಪೂರ್ಣವಾಗಿ ಬದಲಿಸುತ್ತದೆ.

20.3 Google ನಿಮಗೆ, ನಿಯಮಗಳ ಬದಲಾವಣೆಯ ಬಗ್ಗೆ ಪ್ರಕಟಣೆಗಳನ್ನು ಇಮೇಲ್ ಮೂಲಕ, ಸಾಮಾನ್ಯ ಮೇಲ್ ಅಥವಾ ಸೇವೆಗಳಲ್ಲಿನ ಪೋಸ್ಟಿಂಗ್ ಮೂಲಕ ಒದಗಿಸಬಹುದೆಂದು ನೀವು ಒಪ್ಪುತ್ತೀರಿ.

20.4 ಕೆಲವೊಮ್ಮೆ Google ನಿಯಮದಲ್ಲಿರುವ ಯಾವುದೇ ಕಾನೂನು ಹಕ್ಕು ಅಥವಾ ಪರಿಹಾರವನ್ನು ಆಚರಣೆಗೆ ತರದಿದ್ದರೆ ಅಥವಾ ಅಧಿಕಾರ ಚಲಾಯಿಸದಿದ್ದರೆ (ಅಥವಾ ಯಾವುದೇ ಅನ್ವಯಿತ ಕಾನೂನಿನಡಿ Google ಗೆ ಪ್ರಯೋಜನವಿದ್ದರೆ), ಇದನ್ನು Google ನವರ ಹಕ್ಕಿನ ಔಪಚಾರಿಕ ವಿನಾಯಿತಿಯೆಂದು ಪರಿಗಣಿಸಲಾಗುವುದಿಲ್ಲ ಹಾಗೂ ಆ ಹಕ್ಕುಗಳು ಅಥವಾ ಪರಿಹಾರಗಳು Google ಗೆ ಈಗಲೂ ಲಭ್ಯವಿದೆ ಎಂದು ನೀವು ಒಪ್ಪುತ್ತೀರಿ.

20.5 ಈ ವಿಷಯದ ವಿಚಾರಣಾ ಅಧಿಕಾರ ವ್ಯಾಪ್ತಿಯ ಯಾವುದೇ ನ್ಯಾಯಾಲಯವು, ಯಾವುದೇ ನಿಯಮಗಳ ಸೌಲಭ್ಯವನ್ನು ಅಸಿಂಧುವೆಂದು ಘೋಷಿಸಿದ್ದಲ್ಲಿ, ಆ ಸೌಲಭ್ಯವನ್ನು ನಿಯಮಗಳ ಪಟ್ಟಿಯಿಂದ, ಉಳಿದವುಗಳಿಗೆ ಹಾನಿಯಾಗದಂತೆ ತೆಗೆದುಹಾಕಲಾಗುವುದು. ಬಾಕಿ ಉಳಿದ ನಿಯಮಗಳ ಸೌಲಭ್ಯಗಳು ಮಾನ್ಯವಾಗಿದ್ದು ಮಾನ್ಯವಾಗಿ ಮುಂದುವರಿಯುತ್ತದೆ.

20.6 Google ನ ಒಡೆತನದಲ್ಲಿರುವ ಕಂಪನಿಗಳ ಸಮೂಹದಲ್ಲಿರುವ ಪ್ರತಿಯೊಬ್ಬ ಸದಸ್ಯನು ನಿಯಮಗಳ ಮೂರನೇ ವ್ಯಕ್ತಿಯ ಫಲಾನುಭವಿಯಾಗಿರುತ್ತಾರೆ ಮತ್ತು ಅಂತಹ ಇತರ ಕಂಪನಿಗಳನ್ನು ನೇರವಾಗಿ ಅಧಿಕಾರ ಚಲಾಯಿಸಲು ಮತ್ತು ಅವಲಂಬಿಸಲು, ನಿಯಮಗಳ ಯಾವುದೇ ಕರಾರುಗಳು ಅವರಿಗೆ ಪ್ರಯೋಜನವಾಗುತ್ತದೆ ಎಂಬುದನ್ನು ನೀವು ಸಮ್ಮತಿಸುತ್ತೀರಿ ಮತ್ತು ಒಪ್ಪುತ್ತೀರಿ. ಇದಲ್ಲದಿದ್ದರೆ, ಯಾವುದೇ ವ್ಯಕ್ತಿ ಅಥವಾ ಕಂಪನಿಯು ನಿಯಮಗಳ ತೃತೀಯ ಪಕ್ಷದ ಫಲಾನುಭವಿಯಾಗಲು ಸಾಧ್ಯವಿಲ್ಲ.

20.7 ನಿಯಮಗಳು, ಹಾಗೂ ನಿಯಮಗಳಡಿಯಲ್ಲಿರುವ ನಿಮ್ಮ ಮತ್ತು Google ನ ಸಂಬಂಧಗಳು, ಅದರ ಯಾವುದೇ ನಿಯಮಗಳ ಕರಾರಿನ ಸಂಘರ್ಷಗಳ ಪರಿಗಣನೆಯಿಲ್ಲದೆ ಸ್ಟೇಟ್ ಆಫ್ ಕ್ಯಾಲಿಫೋರ್ನಿಯಾದ ಕಾನೂನು ಪ್ರಕಾರ ಚಲಾಯಿಸಲ್ಪಡುವುದು. ನಿಯಮಗಳಿಂದ ಉದ್ಭವಿಸಬಹುದಾದ ಯಾವುದೇ ಕಾನೂನು ವಿಷಯಗಳನ್ನು ನೀವು ಮತ್ತು Google ಸ್ಯಾಂಟ್ ಕ್ಲಾರಾ ಕ್ಯಾಲಿಫೋರ್ನಿಯಾದ ಒಳಗೆ ನೆಲೆಸಿರುವ ನ್ಯಾಯಾಲಯ ವ್ಯಾಪ್ತಿಯನ್ನು ಸಲ್ಲಿಸಲು ಒಪ್ಪಿರುತ್ತೀರಿ. ಹಾಗಿದ್ದರೂ, ಯಾವುದೇ ನ್ಯಾಯಾಲಯ ವ್ಯಾಪ್ತಿಯಲ್ಲಿ ಪ್ರತಿಬಂಧಕ ಉಪಾಯಗಳಿಗೆ (ಅಥವಾ ಸಮಾನ ರೀತಿಯ ತುರ್ತು ಕಾನೂನುಬದ್ದ ಪರಿಹಾರ) Google ಗೆ ಅನುಮತಿಸಲು ನೀವು ಒಪ್ಪಿರುತ್ತೀರಿ.

ಅಗಸ್ಟ್ 15, 2008